ಬೆಂಗಳೂರು, ಜೂ 01 (DaijiworldNews/HR): ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಚುನಾವಣೆಗೆ ಮೊದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಪರಸ್ಪರ ಟೀಕಿಸುತ್ತಿದ್ದರು. ಆದರೆ ಚುನಾವಣೆಯ ನಂತರ ಇಬ್ಬರು ನಾಯಕರು ಅದನ್ನೆಲ್ಲ ಮರೆತಿದ್ದಾರೆ.
ಇನ್ನು ಶಿವಕುಮಾರ್ ಯಡಿಯೂರಪ್ಪರನ್ನು ಅವರ ಡಾಲರ್ಸ್ ಕಾಲೋನಿ ಮನೆಯಲ್ಲಿ ಬೇಟಿಯಾಗಿದ್ದು, ಡಿಕೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮನೆಯ ಮೇನ್ ಗೇಟ್ ವರೆಗೆ ಬಂದು ಸ್ವಾಗತಿಸಿದ್ದಾರೆ.