ಪಂಜಾಬ್,ಮಾ30(AZM):ಕಚೇರಿಗೆ ನುಗ್ಗಿ, ಮಹಿಳಾ ಅಧಿಕಾರಿಯೋರ್ವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಂಜಾಬ್ ನ ಖರಾರ್ ಎಂಬಲ್ಲಿ ನಡೆದಿದೆ.
ಹತ್ಯೆಗೀಡಾದವರನ್ನು ನೇಹಾ ಶೋರಿ ಎಂದು ಗುರುತಿಸಲಾಗಿದೆ. ಖರಾರ್ ನ ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿಯ ಕಚೇರಿಗೆ ನುಗ್ಗಿದ ದುಷ್ಕರ್ಮಿ ಪರವಾನಗಿ ಹೊಂದಿದ್ದ ರಿವಾಲ್ವರ್ನಿಂದ ಮೂರು ಬಾರಿ ಗುಂಡು ಹಾರಿಸಿ ಅಧಿಕಾರಿಯನ್ನು ಹತ್ಯೆಗೈದ ಬಳಿಕ ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆಗಲೇ ಅಲ್ಲಿ ನೆರದಿದ್ದ ಜನರು ತಡೆಯಲು ಶ್ರಮಿಸಿದಾಗ ಆತ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆ.
ತೀವ್ರ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
2009ರಲ್ಲಿ ಆರೋಪಿ ಮೋರಿಂಡಾದಲ್ಲಿ ಔಷಧಿ ಅಂಗಡಿ ನಡೆಸುತ್ತಿದ್ದ ವೇಳೆ ಜಿಲ್ಲಾ ಡ್ರಗ್ಸ್ ಇನ್ಸ್ಪೆಕ್ಟರ್ ಆಗಿದ್ದ ನೇಹಾ, ಆತನ ಔಷಧಿ ಅಂಗಡಿಗೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಪರವಾನಗಿ ರದ್ದುಗೊಳಿಸಿದ್ದರು.