ಬೆಂಗಳೂರು, ಜೂ 02 (DaijiworldNews/SM): 2022-23ರ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿದ್ದರೆ ಅಂತವರಿಗೆ ‘ಯುವನಿಧಿ’ ಯೋಜನೆ ಅಡಿಯಲ್ಲಿ ತಿಂಗಳಿಗೆ 3000 ರೂ. ನೀಡಲಾಗುತ್ತದೆ. ಬಿಎ, ಬಿಎಸ್ಸಿಸ, ಬಿಕಾಂ ಪದವೀಧರ 18ರಿಂದ 25 ವರ್ಷದೊಳಗಿನ ನಿರುದ್ಯೋಗಿಗಳಿಗೆ ಯುವನಿಧಿ ಲಾಭ ಸಿಗಲಿದೆ.
2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂ.ಡಿಪ್ಲೋಮಾ ಹೋಲ್ಡರ್ಸ್ ಗೆ 1500 ಪಾವತಿ ಮಾಡಲಾಗುತ್ತದೆ. 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಆಗ ಹಣ ಪಾವತಿ ಇಲ್ಲ. ನಿರುದ್ಯೋಗಿ ಎಂದು ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಸಿಗಲಿದೆ.
ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಪಾವತಿ ಮಾಡಲಾಗುತ್ತಿದ್ದು, ಟ್ರಾನ್ಸ್ ಜೆಂಡರ್ಸ್ ಗೆ ಕೂಡಾ ಯುವ ನಿಧಿ ಅನ್ವಯವಾಗಲಿದೆ. ದುರ್ಬಳಕೆ ತಡೆಯಲು ಕೆಲವು ಷರತ್ತುಗಳನ್ನು ವಿಧಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.