ಹಾವೇರಿ:ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ 'ಸರಿಗಮಪ' ಖ್ಯಾತಿಯ ಸಿಂಗರ್, ಕುರಿಗಾಹಿ ಹನುಮಂತ ಅವರು ಆಯ್ಕೆಯಾಗಿದ್ದಾರೆ.
ಮತದಾರರಲ್ಲಿ ಜಾಗೃತಿ ಮೂಡಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ಗಾಯಕ ಹನುಮಂತರನ್ನು ಆಯ್ಕೆ ಮಾಡಿದೆ. ಪರಿಣಾಮ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲರು ತಪ್ಪದೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು ಎಂದು ಹನುಮಂತ ಅವರು ಅರಿವು ಮೂಡಿಸಲಿದ್ದಾರೆ.
ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆ ಆಗಿರುವ ಹನುಮಂತ ಅವರು ಈಗಾಗಲೇ ಜಿಲ್ಲೆಯಲ್ಲಿ ವಿವಿ ಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು ಮಾದರಿಯನ್ನು ನೀಡಿದ್ದಾರೆ.
ಜಾನಪದ ಹಾಡುಗಳಿಂದ ಸಂಗೀತ ಲೋಕವೆ ಅಚ್ಚರಿ ಪಡುವಂತೆ ಮಾಡಿದ್ದ ಗಾಯಕ ನಾದಬ್ರಹ್ಮ ಹಂಸಲೇಖ ಅವರ ಮೆಚ್ಚುಗೆ ಪಡೆದುಕೊಂಡಿದ್ದರು.