ಶಿವಮೊಗ್ಗ, ಜೂ 03 (DaijiworldNews/HR): ಪಠ್ಯ ಪುಸ್ತಕಗಳ ಪರಿಷ್ಕರಣೆ 100% ಮಾಡುಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಕ್ಕಳಿಗೆ ಅವಶ್ಯಕತೆ ಏನೀದೆ ಅದನ್ನು ನೀಡುತ್ತೇವೆ. ಮಕ್ಕಳಿಗೆ ಏನೂ ಬೇಕು ಅದನ್ನು ನೀಡುತ್ತೆವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಆಗುತ್ತದೆ ಎಂದು ತಿಳಿಸಿದ್ದೆವು. ಈಗಾಗಲೇ ಪಠ್ಯ ಪುಸ್ತಕ ಶಾಲೆಗಳಿಗೆ ಹೋಗಿದೆ. ಅದನ್ನು ತಡೆಯಲು ಆಗಲಿಲ್ಲ ಎಂದರು.
ಇನ್ನು ನಾನು ಅಧಿಕಾರ ತೆಗೆದುಕೊಂಡಾಗ ಪಠ್ಯ ಪುಸ್ತಕ ಹೋಗಿ ಆಗಿತ್ತು. ಅದಕ್ಕೆ ಕಾನೂನು ಬದ್ದವಾಗಿ ತಡೆಯುವ ವ್ಯವಸ್ಥೆ ಇದೆ ಎಂದಿದ್ದಾರೆ.
ಮಕ್ಕಳ ಭವಿಷ್ಯಕ್ಕಾಗಿ ಏನ್ ಬದಲಾವಣೆ ಮಾಡಬೇಕೂ ಅದನ್ನು ಮಾಡೇ ಮಾಡುತ್ತೆವೆ. ಅದರಲ್ಲಿ ಏನೂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.