ಶಿವಮೊಗ್ಗ,ಮಾ31(AZM) :ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ.ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಭದ್ರಾವತಿ ಕೈ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ಮಾತನಾಡಿದ ಡಿಕೆಶಿ, ನನಗೆ ಬೇಸರ ಇರುವುದು ಬಿಜೆಪಿ ಹೈಕಮಾಂಡ್ ಮೇಲೆ. ಬಿಎಸ್ ವೈ ಮೇಲಲ್ಲ. ಇಲ್ಲಿಯವರೆಗೆ ರಾಘವೇಂದ್ರ ಪಾರ್ಲಿಮೆಂಟ್ ನಲ್ಲಿ ಒಂದೂ ಮಾತಾಡಿಲ್ಲ. ಅದಕ್ಕೆ ನನ್ನ ತಮ್ಮ ರಾಘವೇಂದ್ರ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ, ಅಣ್ಣ ವಿಪಕ್ಷ ನಾಯಕರಾಗಿಯೇ ಇರಲಿ, ನಾನು ಮಂತ್ರಿಯಾಗೇ ಇರುತ್ತೇನೆ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್ ಕೈ ತಪ್ಪಿದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ತೇಜಸ್ವಿನಿ ಅನಂತ್ ಕುಮಾರ್ ಗೆ ಎಂಥಾ ಸ್ಥಿತಿ ಬಂತು ನೋಡಿ, ಇನ್ನೂ ಬಿಎಸ್ ವೈ ಸ್ಥಿತಿ ಏನಾಗುತ್ತೇ ಯೋಚನೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.