ನವದೆಹಲಿ, ಜೂ 04 (DaijiworldNews/MS): ಹಿಜ್ಬ್ - ಉತ್- ತಹ್ರೀರ್ (HuT) ದೇಶಾದ್ಯಂತ ಸ್ಫೋಟಗಳಮಾಸ್ಟರ್ ಮೈಂಡ್ ಎಂದು ಎನ್ಐಎ ಹೇಳಿದೆ.
ಮಧ್ಯಪ್ರದೇಶ ಮತ್ತು ತೆಲಂಗಾಣ ಗುಪ್ತಚರ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳೆದ ತಿಂಗಳು ಭೋಪಾಲ್ ಮತ್ತು ಹೈದರಾಬಾದ್ನಲ್ಲಿ 17 ಹಿಜ್ಬ್ - ಉತ್- ತಹ್ರೀರ್ ನಲ್ಲಿದ್ದ ಶಂಕಿತರನ್ನು ಬಂಧಿಸಲಾಗಿತ್ತು.
ಈ ಸಂಬಂಧ ಎನ್ಐಎ ಸಮಗ್ರ ತನಿಖೆ ನಡೆಸುತ್ತಿದ್ದು, ಆರೋಪಿಗಳು ಬಾಂಬ್ ಸ್ಫೋಟದ ಮೂಲಕ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಎಸಗಲು ಪ್ಲಾನ್ ಮಾಡಿದ್ದರು ಎಂದು ತನಿಖೆಯಿಂದ
ತಿಳಿದುಬಂದಿದೆ.
ಹಿಜ್ಬ್-ಉಲ್-ತಹ್ರೀರ್ (HuT) ನ ಸದಸ್ಯರು ಮಧ್ಯಪ್ರದೇಶದಲ್ಲಿ ರಹಸ್ಯವಾಗಿ ಮುಸ್ಲಿಂ-ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳುವ ಮೂಲಕ ಅದರ ಕಾರ್ಯಕರ್ತರನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ, ಅವರು ಷರಿಯಾ ಕಾನೂನನ್ನು ಸ್ಥಾಪಿಸುವ ಸಲುವಾಗಿ ಭಾರತದಲ್ಲಿ ಸಾಂವಿಧಾನಿಕವಾಗಿ ರಚಿಸಲಾದ ಸರ್ಕಾರವನ್ನು ಉರುಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಎನ್ಐಎ ತನ್ನ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದೆ.