ಮುಂಬೈ, ಜೂ 08 (DaijiworldNews/HR): ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.
ಮನೋಜ್ ಸಹಾನಿ (36) ಕಳೆದ ಮೂರು ವರ್ಷಗಳಿಂದ ಸರಸ್ವತಿ ವೈದ್ಯ (36) ಎಂಬುವವರೊಂದಿಗೆ ವಾಸವಾಗಿದ್ದರು.
ಬುಧವಾರ ಸಂಜೆ ಫ್ಲಾಟ್ ನ ಇತರೆ ಸದಸ್ಯರು ಮನೋಜ್ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರು ಬಂದು ನೋಡಿದಾಗ 3-4 ದಿನಗಳ ಹಿಂದೆ ಕೊಲೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್ ನಲ್ಲಿ ಬೇಯುತ್ತಿರುವುದನ್ನು ಪೊಲೀಸರು ನೋಡಿದ್ದಾರೆ.
ಕೆಲವು ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು. ಆಕೆಯ ದೇಹವನ್ನು ಮರ ಕಟ್ ಮಾಡುವ ಮಿಷನ್ ನಿಂದ ತುಂಡು ಮಾಡಲಾಗಿದೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ನಮಗೆ ಗೊತ್ತಾಗಿದೆ. ಶಂಕಿತ ಆರೋಪಿ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ ಅವರು ಹೇಳಿದ್ದಾರೆ.