ನವದೆಹಲಿ, ಜೂ 09 (DaijiworldNews/HR): ರಾಹುಲ್ ಗಾಂಧಿ ಅವರು ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಘೋಷಣೆಗೆ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಯವರ “ಮೊಹಬ್ಬತ್ ಕಿ ದುಕಾನ್” ಹೇಳಿಕೆಯ ಕುರಿತು ಪ್ರಶ್ನಿಸಿರುವ ಸ್ಮೃತಿ ಇರಾನಿ, “ಮೊಹಬ್ಬತ್” (ಪ್ರೀತಿ) ಎಂದರೆ ಹಿಂದೂ ಜೀವನ ವಿಧಾನವನ್ನು ಖಂಡಿಸುವುದು, ಸಿಖ್ಖರ ಹತ್ಯೆ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಹೊರಗಿನ ಹಸ್ತಕ್ಷೇಪವನ್ನು ಬಯಸುತ್ತದೆಯೇ’ ಎಂದು ಕೇಳಿದ್ದಾರೆ.
ಇನ್ನು “ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಅದು ರಾಜಸ್ಥಾನದಲ್ಲಿ ಮಹಿಳೆಯರ ಅಪಹರಣವನ್ನು ಒಳಗೊಂಡಿರುತ್ತದೆಯೇ? ಅಥವಾ ಹಿಂದೂ ಜೀವನ ವಿಧಾನವನ್ನು ಖಂಡಿಸುವುದನ್ನು ಒಳಗೊಂಡಿರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು 2022ರಲ್ಲಿ ನಡೆಸಿದ ಭಾರತ್ ಜೋಡೊ ಯಾತ್ರೆಯ ವೇಳೆ ಈ ಮೊಹಬ್ಬತ್ ಕಿ ದುಕಾನ್ ಎಂಬ ಘೋಷಣೆ ಆರಂಭಿಸಿದ್ದರು.