ಬೆಂಗಳೂರು, ಜೂ 10 (DaijiworldNews/MS): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಅಧಿವೇಶನ ವಿಧಾನ ಮಂಡಲದ ಅಧಿವೇಶನ ಜು.೩ರಂದು ಪ್ರಾರಂಭವಾಗಲಿದ್ದುಆ ದಿನ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಜು.4ರಿಂದ ಉಭಯ ಸದನಗಳ ಅಧಿಕೃತ ಕಾರ್ಯಕಲಾಪಗಳು ಆರಂಭವಾಗಲಿದ್ದು, 14ರವರೆಗೆ ಅಧಿವೇಶನ ನಡೆಯಲಿದೆ. 7ಕ್ಕೆ ಬಜೆಟ್ ಮಂಡನೆಯಾಗಲಿದ್ದು, ವಿಧಾನ ಪರಿಷತ್ ಅಧಿವೇಶನ ಜು.3ರಿಂದ ಸಮಾವೇಶಗೊಳ್ಳುವಂತೆ ರಾಜ್ಯಪಾಲ ಗೆಹ್ಲೋಟ್ ಅಧಿಸೂಚನೆ ಹೊರಡಿಸಿದ್ದಾರೆ.
ಜು. 7 ರಂದು ಬಜೆಟ್ ಮಂಡಿಸಿದ ಬಳಿಕ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ.