ನವದೆಹಲಿ, ಜೂ 11 (DaijiworldNews/HR): 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪ್ರಧಾನಿ ಮೋದಿಯವರು ನರೇಂದ್ರ ಪುಟಿನ್ ಆಗುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಾಗ್ದಾಳಿ ನಡೆಸಿದ ಅವರು, 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಚುನಾವಣೆಯೇ ಇರುವುದಿಲ್ಲ. ಬಿಜೆಪಿ ನಾಯಕರು ಮೋದಿಯನ್ನು ಭಾರತದ ‘ಮಲಿಕ್’ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. 140 ಕೋಟಿ ಭಾರತೀಯರು ಭಾರತವನ್ನು ಉಳಿಸಲು ನಿರ್ಧರಿಸಿದರೆ, ದೇಶವನ್ನು ಉಳಿಸಬಹುದು ಎಂದರು.
ಇನ್ನು ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಕ್ಷ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಹಾ ರ್ಯಾಲಿ ನಡೆಸಿದ್ದು, ಈ ವೇಳೆ ಮೋದಿ ವಿರುದ್ದ ಭಗವಂತ್ ಮಾನ್ ವಾಗ್ದಾಳಿ ನಡೆಸಿದ್ದಾರೆ.