ಬೆಂಗಳೂರು, ಜೂ. 11 (DaijiworldNews/SM): ಮಹಿಳೆಯರಿಗೆ ಶಕ್ತಿ ತುಂಬಲು ‘ಶಕ್ತಿ ಯೋಜನೆ’ ಎಂಬ ಹೆಸರು ಇಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ವಿಧಾನಸೌಧ ಮುಂದೆ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪಾಲ್ಗೊಂಡಾಗ ಮಾತ್ರ ದೇಶ ಅಭಿವೃದ್ದಿ ಕಾಣಲು ಸಾಧ್ಯ. ಬಡವರ ಜೇಬಿಗೆ ದುಡ್ಡು ಹಾಕುವುದೇ ನಮ್ಮ ಸರ್ಕಾರದ ಉದ್ದೇಶ. 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳು ಮಹಿಳೆಯರಿಗೆ ಸೀಮಿತವಾಗಿದೆ. ಹೆಣ್ಣು ಸಮಾಜದ ಕಣ್ಣು ಇದ್ದಂತೆ ಎಂದು ಹೇಳಿದರು.
ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕೆಂಬುದು ನಮ್ಮ ಉದ್ದೇಶ. ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳು ಪ್ರಮುಖವಾದದ್ದು. ನಾನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಮನೆಗೆ ಗ್ಯಾರಂಟಿ ವಿತರಿಸಿದ್ದೆವು. ಗ್ಯಾರಂಟಿ ಕಾರ್ಡ್ ಕೊಟ್ಟಿದ್ದನ್ನು ವಿಪಕ್ಷಗಳು ಗೇಲಿ ಮಾಡಿದ್ದರು. ವಿಪಕ್ಷಗಳ ಟೀಕೆಗೆ ನಾವು ವಿಚಲಿತರಾಗಲಿಲ್ಲ. ರಾಜ್ಯದ ಜನರ ಆಶೀರ್ವಾದಿಂದ ನಮಗೆ ಸ್ಪಷ್ಟ ಬಹುಮತ ಸಿಕ್ಕಿತು. ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದೆವು ಯಾವ್ಯಾವ ಗ್ಯಾರಂಟಿ ಯಾವ ದಿನ ಜಾರಿ ಎಂದು ಆದೇಶ ಹೊರಡಿಸಿದ್ದೇವೆ. ಅದರಂತೆಯೇ ಇಂದು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿದ್ದೇವು. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕೆಂಬುದು ನಮ್ಮ ಉದ್ದೇಶ. ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳು ಪ್ರಮುಖವಾದದ್ದು. ನಾನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಮನೆಗೆ ಗ್ಯಾರಂಟಿ ವಿತರಿಸಿದ್ದೇವು. ಗ್ಯಾರಂಟಿ ಕಾರ್ಡ್ ಕೊಟ್ಟಿದ್ದನ್ನು ವಿಪಕ್ಷಗಳು ಗೇಲಿ ಮಾಡಿದ್ದರು. ವಿಪಕ್ಷಗಳ ಟೀಕೆಗೆ ನಾವು ವಿಚಲಿತರಾಗಲಿಲ್ಲ. ರಾಜ್ಯದ ಜನರ ಆಶೀರ್ವಾದಿಂದ ನಮಗೆ ಸ್ಪಷ್ಟ ಬಹುಮತ ಸಿಕ್ಕಿತು. ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದೆವು ಯಾವ್ಯಾವ ಗ್ಯಾರಂಟಿ ಯಾವ ದಿನ ಜಾರಿ ಎಂದು ಆದೇಶ ಹೊರಡಿಸಿದ್ದೇವೆ. ಅದರಂತೆಯೇ ಇಂದು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೇರೆ ರಾಜ್ಯಗಳ ಗಡಿಗಳಲ್ಲಿ ಕೂಡ ಶೂನ್ಯ ಟಿಕೆಟ್: ಬೇರೆ ರಾಜ್ಯಗಳ ಗಡಿಭಾಗಗಳಲ್ಲಿ ಮಹಿಳೆಯರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚರಿಸುವಾಗಲೂ ಟಿಕೆಟ್ ದರ ವಿಧಿಸುವುದಿಲ್ಲ. ಉದಾಹರಣೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣಿಸುವಾಗ ಮಧ್ಯದಲ್ಲಿ ಬೇರೆ ರಾಜ್ಯಗಳ ಗಡಿ ಬಂದರೆ ಆಗ ಟಿಕೆಟ್ ದರ ಮಹಿಳೆಯರಿಗೆ ಇರುವುದಿಲ್ಲ. 20 ಕಿಲೋ ಮೀಟರ್ ವರೆಗೆ ಮಹಿಳೆಯರು ಈ ರೀತಿ ಉಚಿತವಾಗಿ ಪ್ರಯಾಣಿಸಬಹುದು ಎಂದರು.
ವಿದ್ಯುತ್ ದರ ಏರಿಸಿದ್ದು ನಾವಲ್ಲ: ಸಿದ್ದರಾಮಯ್ಯ ವಿದ್ಯುತ್ ದರ ಹೆಚ್ಚಿಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ವಿದ್ಯುತ್ ದರ ಹೆಚ್ಚಳ ಮಾಡಿರುವುದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಳ ಮಾಡಿಲ್ಲ. ವಿದ್ಯುತ್ ದರ ಹೆಚ್ಚಳ ಬಗ್ಗೆ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ಮೇ 12ರಂದು ಘೋಷಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಮೇ 12ರಿಂದ ವಿದ್ಯುತ್ ದರ ಏರಿಕೆ ಎಂದು ಏಪ್ರಿಲ್ ನಲ್ಲೇ ತೀರ್ಮಾನ ಆಗಿತ್ತು. ಗ್ಯಾರಂಟಿ ಯೋಜನೆಯಿಂದ ವಿಪಕ್ಷಗಳಿಗೆ ನಡುಕ ಶುರುವಾಗಿದೆ. ಬೇಕಾದಷ್ಟು ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಅವರು ಗೇಲಿ ಮಾಡಿಕೊಂಡು ಅಲ್ಲಿಯೇ ಇರಲಿ. ನಮ್ಮ ಗ್ಯಾರಂಟಿ ಮುಂದುವರಿಸಿಕೊಂಡು ನಾವು ಮುಂದೆ ಹೋಗುತ್ತೇವೆ. ಜುಲೈ 1ರಿಂದ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿ ಆಗುತ್ತೆ. 200 ಯೂನಿಟ್ಯೊಳಗೆ ವಿದ್ಯುತ್ ಬಳಸಿದರೆ ಬಿಲ್ ಬರುವುದಿಲ್ಲ.ಗೊಂದಲ ಸೃಷ್ಟಿ ಮಾಡುವುದೇ ಬಿಜೆಪಿಯರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.