ನವದೆಹಲಿ, ಜೂ 13 (DaijiworldNews/MS): ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ಕೋಟ್ಯಾಂತರ ಜನರು, ರಾಜಕಾರಣಿಗಳು , ಪತ್ರಕರ್ತರ ಖಾಸಗಿ ಮಾಹಿತಿ ಸೋರಿಕೆಯಾಗಿ ಎಂದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪಿಸಿದ ಬೆನ್ನಲ್ಲೇ, ’ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ ’ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಲಸಿಕೆಗಾಗಿ ಕೋವಿನ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಿಕೊಂಡವರ ಆಧಾರ್, ಪಾಸ್ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಆನ್ಲೈನ್ ಮೆಸೆಂಜರ್ ಆ್ಯಪ್ ಟೆಲಿಗ್ರಾಂನಲ್ಲಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಒಟಿಪಿ ಇಲ್ಲದೆ ಡೇಟಾವನ್ನು ಲೀಕ್ ಮಾಡುವ ಯಾವುದೇ ಸಾರ್ವಜನಿಕ ಅಪ್ಲಿಕೇಶನ್ಗಳಿಲ್ಲ. ಕೋವಿನ್ ದತ್ತಾಂಶ ಸೋರಿಕೆಯಾಗಿಲ್ಲ, ಮಾಹಿತಿ ಸುರಕ್ಷಿತವಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೋವಿನ್ ಪೋರ್ಟಲ್ಗಾಗಿ ತೆಗೆದುಕೊಂಡ ಭದ್ರತಾ ಕ್ರಮಗಳ ಬಗ್ಗೆಯೂ ಆರೋಗ್ಯ ಸಚಿವಾಲಯ ವಿವರಣೆ ನೀಡಿದೆ.