ಬೆಂಗಳೂರು, ಜೂ 14 (DaijiworldNews/MS): ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ ಮರುತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ಕುರಿತು ಮರುಪರಿಶೀಲನೆ ಮಾಡಲಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೊತೆಗೆ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 20 ದಿನ ಆಗಿದೆಯಷ್ಟೇ. ಬಿಜೆಪಿಯವರು ಸಮಾಧಾನವಾಗಿದ್ದರೆ ಒಳ್ಳೆಯದು ಪರಮೇಶ್ವರ್ ಹೇಳಿದ್ದಾರೆ.
ಏನಿದು ಬಿಟ್ಕಾಯಿನ್ ಸ್ಕ್ಯಾಮ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ಕಾಯಿನ್ ಸ್ಕ್ಯಾಮ್ ಸದ್ದು ಮಾಡಿತ್ತು. ಈ ಹಗರಣದಲ್ಲಿ 3 ಐಪಿಎಸ್ ,9 ಇನ್ಸ್ಪೆಕ್ಟರ್, ಡಿವೈಎಸ್ಪಿಗಳು ಶಾಮೀಲಾಗಿದ್ದ ಆರೋಪ ಕೇಳಿಬಂದಿದೆ. ಬಿಟ್ ಕಾಯಿನ್ ಹಗರಣ 1 ಸಾವಿರ ಕೋಟಿ ದಂಧೆಯಾಗಿದೆ. ಹಗರಣದಲ್ಲಿ ದೊಡ್ಡ ಕುಳಗಳು ಕೋಟಿ ಕೋಟಿ ತಿಂದು ತೇಗಿದ್ದರು. ಬಿಟ್ ಕಾಯಿನ್ ದಂಧೆಯಲ್ಲಿ ಕಿಂಗ್ಪಿನ್ ಶ್ರೀಕಿ ಎಂಬಾತ ಸಿಕ್ಕಿಬಿದ್ದಿದ್ದ. ಇದೀಗ ಈ ಹಗರಣದಲ್ಲಿ ಭಾಗಿಯಾಗಿದ್ದವರಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.