ಜೈಪುರ,ಜೂ 16 (DaijiworldNews/MS): ರಾಜಸ್ಥಾನ ರಾಜ್ಯ ಸರ್ಕಾರವು ಮಹಿಳೆಯರ ಹಿತದೃಷ್ಟಿಯಿಂದ ಹಲವಾರು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಪೈಕಿ ಉಚಿತ ಮೊಬೈಲ್ ಯೋಜನೆ ಒಂದಾಗಿದೆ. ರಕ್ಷಾ ಬಂಧನದಂದು ಮಹಿಳೆಯರಿಗೆ ಮೊಬೈಲ್ ಫೋನ್ ವಿತರಣಾ ಕಾರ್ಯಕ್ರಮ ಜಾರಿಗೊಳಿಸುವಾಗಿ ಘೋಷಣೆ ಮಾಡಿರುವ ಸರ್ಕಾರ ಇದೀಗ ಮೊಬೈಲ್ ಗಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಅವರ ಖಾತೆಗೆ ವರ್ಗಾಯಿಸುವ ಚಿಂತನೆ ನಡೆಸಿದೆ.
ಉಚಿತ ಮೊಬೈಲ್ ಫೋನ್ ಯೋಜನೆಯು ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಎಂದು ಹೆಸರಿಸಲಾಗಿದ್ದು , ರಾಜ್ಯದಲ್ಲಿ ಮಹಿಳೆಯರನ್ನು ಆನ್ಲೈನ್ನಲ್ಲಿ ಶಿಕ್ಷಣ ನೀಡುವುದು ಇದರ ಪ್ರಮುಖ ಉದ್ದೇಶ. ಇಂದಿನ ಕಾಲದಲ್ಲಿ ನೀಯಾವುದೇ ರೀತಿಯ ಮಾಹಿತಿಯನ್ನು ಆನ್ಲೈನ್ನಲ್ಲಿ ಪಡೆಯಬಹುದು. , ಆದರೆ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಕೊರತೆಯಿಂದಾಗಿ, ಮಹಿಳೆಯರು ಇನ್ನೂ ಹಿಂದುಳಿದಿದ್ದಾರೆ . ಹೀಗಾಗಿ ಡಿಜಿಟಲ್ ಸೇವಾ ಯೋಜನೆ ಪ್ರಾರಂಭಿಸಲಾಗಿ ಎಂದು ಸರ್ಕಾರ ಹೇಳಿಕೊಂಡಿದೆ.
ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್ಫೋನ್ಗಳನ್ನು ನೀಡಲಿದ್ದು ಆಗಸ್ಟ್ 30ರ ರಕ್ಷಾ ಬಂಧನದಂದು ಕಾರ್ಯಕ್ರಮ ಆರಂಭವಾಗಲಿದ್ದು, 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್ಫೋನ್ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಹೇಳಿದ್ದರು
ಆದರೆ ಸರ್ಕಾರ ನೀಡುವ ಸ್ಮಾರ್ಟ್ಫೋನ್ ಬದಲಾಗಿ ಮಹಿಳೆಯರು ಅವರ ಇಷ್ಟದ ಸ್ಮಾರ್ಟ್ಫೋನ್ ಖರೀದಿಸಲು ನಿರ್ದಿಷ್ಟ ಮೊತ್ತದ ಹಣವನ್ನು ಅವರ ಖಾತೆಗೇ ಜಮೆ ಮಾಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಗುರುವಾರ ಹೇಳಿದ್ದಾರೆ
"ಜನರು ಅವರ ಆಯ್ಕೆಯ ಫೋನ್ ಖರೀದಿಸಲು ಬಯಸುತ್ತಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎಷ್ಟು ಮೊತ್ತವನ್ನು ವರ್ಗಾಯಿಸಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದು ಜನರು ಅವರ ಆಯ್ಕೆಯ ಫೋನ್ ಖರೀದಿಸಲು ಬಯಸುತ್ತಾರೆ. ಫೋನ್ ವಿತರಿಸುವುದಕ್ಕೆ ಬದಲಾಗಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನಿಗದಿತ ಮೊತ್ತವನ್ನು ವರ್ಗಾಯಿಸಲು ಸರ್ಕಾರ ಚಿಂತಿಸುತ್ತಿದೆ' ಎಂದೂ ಗೆಹ್ಲೋತ್ ಮಾಹಿತಿ ನೀಡಿದ್ದಾರೆ.