ನವದೆಹಲಿ, ಜೂ 16 (DaijiworldNews/MS): ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ (ಎನ್ಎಂಎಂಎಲ್)ಮರುನಾಮಕರಣ ಇದೀಗ ಮತ್ತೊಂಂದು ವಿವಾದ ಸೃಷ್ಟಿಸಿದ್ದು ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್ ಕಿಡಿಕಾರಿದೆ.
ಎನ್ಎಂಎಂಎಲ್ ನ್ನು ಮುಂದೆ ಪ್ರೈಮ್ ಮಿನಿಸ್ಟರ್ಸ್ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ವರದಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಎನ್ಎಂಎಂಎಲ್ ಜಾಗತಿಕ ಬೌದ್ಧಿಕ ಹೆಗ್ಗುರುತು. ಇದೊಂದು ಗ್ರಂಥ ಬಂಡಾರವಾಗಿದೆ. ಪ್ರಧಾನಿ ಮೋದಿ ಭಾರತೀಯ ರಾಷ್ಟ್ರ-ರಾಜ್ಯದ ವಾಸ್ತುಶಿಲ್ಪಿಯ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಕ್ಷುಲ್ಲಕತೆ ಮತ್ತು ಪ್ರತೀಕಾರ ಇನ್ನೊಂದು ಹೆಸರೇ ಮೋದಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತೀಯ ರಾಷ್ಟ್ರ-ರಾಜ್ಯದ ವಾಸ್ತುಶಿಲ್ಪಿಯ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಮೋದಿ ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಸೊಸೈಟಿಯ ಉಪಾಧ್ಯಕ್ಷರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎನ್ಎಂಎಂಎಲ್ ಸೊಸೈಟಿಯ ವಿಶೇಷ ಸಭೆಯಲ್ಲಿ, ಈಗ ಸಂಕೀರ್ಣದಿಂದ ನೆಹರು ಅವರ ಹೆಸರನ್ನು ಕೈಬಿಡಲು ನಿರ್ಧರಿಸಲಾಗಿದ್ದು 59 ವರ್ಷಗಳಿಂದ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಜಾಗತಿಕ ಬೌದ್ಧಿಕ ಹೆಗ್ಗುರುತಾಗಿತ್ತು. ಇದನ್ನು ಪ್ರೈಮ್ ಮಿನಿಸ್ಟರ್ಸ್ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಮರುನಾಮಕಾರಣ ಮಾಡಲಾಗಿದೆ.