ನವದೆಹಲಿ, ಜೂ 19 (DaijiworldNews/MS): ಉತ್ತರ ಪ್ರದೇಶದ ಗೋರಖ್ಪುರದ ಗೀತಾ ಮುದ್ರಾಣಾಲಯಕ್ಕೆ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿದ್ದು ಆದರೆ ಇದು ಈಗ ರಾಜಕೀಯ ವಿವಾದದ ಸ್ವರೂಪ ಪಡೆದಿದೆ.
ಸಾಮಾಜಿಕ ಸೌಹಾರ್ದ, ಶಾಂತಿ ಮತ್ತು ಮಹಾತ್ಮ ಗಾಂಧಿಯವರ ತತ್ವಗಳನ್ನು ಪೋಷಿಸಿ, ಜನಪ್ರಿಯಗೊಳಿಸುವಲ್ಲಿ ಸಂಸ್ಥೆಯ ಪಾತ್ರ ಘನವಾದದ್ದು ಎಂದು ಪರಿಗಣಿಸಿ ನರೇಂದ್ರ ಮೋದಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯು ಗೀತಾ ಮುದ್ರಣಾಲಕ್ಕೆ ಗೌರವ ನೀಡಲು ತೀರ್ಮಾನ ಪ್ರಕಟಿಸಿದೆ.
ಈ ಪ್ರಶಸ್ತಿಯು ರೂ. 1 ಕೋಟಿ ಮೊತ್ತ ನಗದನ್ನು, ಪ್ರಶಸ್ತಿ ಫಲ, ಗುಡಿ ಕೈಗಾರಿಕೆಗಳ ಅತ್ಯುತ್ಕ್ರುಷ್ಟ ಉತ್ಪನ್ನಗಳನ್ನು ಒಳಗೊಂಡಿದೆ.
ಗೀತಾ ಪ್ರೆಸ್ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದಕ್ಕೆ ಕಾಂಗ್ರೆಸ್ ತಗಾದೆ ತೆಗೆದಿದೆ. 'ಗೀತಾ ಪ್ರೆಸ್ಗೆ ಗಾಂಧಿ ಶಾಂತಿ ಪ್ರಶಸ್ತಿ ಕೊಡುವುದೂ ಒಂದೇ, ನಾಥುರಾಮ್ ಗೋಡ್ಸೆ ಹಾಗೂ ವೀರ ಸಾವರ್ಕರ್ ಅವರಿಗೆ ಕೊಡುವುದೂ ಒಂದೇ' ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಜೈರಾಮ್ ರಮೇಶ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, "ಕಾಂಗ್ರೆಸ್ ಹಿಂದೂ ದ್ವೇಷಿ ಪಕ್ಷವಾಗಿದೆ" ಎಂದು ಹೇಳಿದೆ.