ಬೆಂಗಳೂರು, ಜೂ 22 (DaijiworldNews/HR): ರಾಜ್ಯದ ರೈಸ್ ಮಿಲ್ಗಳಿಗೆ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದ್ದು, ಅದನ್ನು ಇಳಿಸದಿದ್ದರೆ ಇಲ್ಲಿಂದ ರಪ್ತು ಆಗುವ ಅಕ್ಕಿಗೆ ಪ್ರತಿ ಕೆಜಿಗೆ 5-10 ರೂಪಾಯಿ ದರ ಏರಿಕೆ ಮಾಡುವುದಾಗಿ ರೈಸ್ ಮಿಲ್ ಅಸೋಸಿಯೇಷನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ರೈಸ್ ಮಿಲ್ ಸಮಸ್ಯೆಗೆ ಸ್ಪಂದಿಸದೇ ವಿದ್ಯುತ್ ಬಿಲ್ ಕಡಿಮೆ ಮಾಡದೇ ಇದ್ದರೆ ಪ್ರತಿ ಕ್ವಿಂಟಾಲ್ ಅಕ್ಕಿ ಬೆಲೆಯನ್ನು 400-800 ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಎಚ್ಚರಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಸುಮಾರು 2 ಸಾವಿರ ರೈಸ್ ಮಿಲ್ಗಳಿದ್ದು, ವರ್ಷಕ್ಕೆ 30 ರಿಂದ 40 ಮೆಟ್ರಿಕ್ ಟನ್ ನಷ್ಟು ಅಕ್ಕಿಯನ್ನ ಉತ್ಪಾದನೆ ಮಾಡಲಾಗುತ್ತದೆ. ದುಬಾರಿ ವಿದ್ಯುತ್ ಬಿಲ್ನಿಂದ ರೈಸ್ ಮಿಲ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.