ನವದೆಹಲಿ, ಜೂ 22 (DaijiworldNews/MS): ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸರ್ವಪಕ್ಷ ಸಭೆ ಕರೆದಿದ್ದು, ಇದನ್ನು ಕಾಂಗ್ರೆಸ್ ಟೀಕಿಸಿದೆ..
"ಮಣಿಪುರದಲ್ಲಿ50 ದಿನಗಳಿಂದ ಗಲಭೆ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಆದರೆ ಈಗ ಅವರು ದೇಶದಲ್ಲಿ ಇಲ್ಲದಿದ್ದಾಗ ಸಭೆ ನಡೆಸುತ್ತಿದ್ದಾರೆ ಇದರಿಂದ ಮೋದಿಯವರಿಗೆ ಈ ಸಭೆ ಮುಖ್ಯವಲ್ಲಎಂಬುವುದು ಸ್ಪಷ್ಟವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
"ತುಂಬಾ ತಡವಾಗಿದೆ ಮತ್ತು ಅತ್ಯಂತ ಸಣ್ಣ ಕ್ರಮ ಮಣಿಪುರದಲ್ಲಿ ಶಾಂತಿಗಾಗಿ ಕೇಂದ್ರ ಸರ್ಕಾರ ಯಾವುದೇ ಗಂಭೀರ ಪ್ರಯತ್ನ ನಡೆಸಿಲ್ಲ. ಅಲ್ಲಿ ಹೋರಾಡುತ್ತಿರುವ ಸಮುದಾಯಗಳನ್ನು ಕೇಂದ್ರ ಸರ್ಕಾರ ಮಾತುಕತೆಗೆ ಕರೆದು ರಾಜಕೀಯ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ಪ್ರಯತ್ನವನ್ನು ದೆಹಲಿಯಲ್ಲಿ ಕುಳಿತು ಮಾಡಿದರೆ ಗಂಭೀರತೆಯ ಕೊರತೆ ಎದ್ದು ಕಾಣುತ್ತದೆ" ಎಂದು ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.