ಮೈಸೂರು, ಜೂ 23 (DaijiworldNews/HR): ಅಕ್ಕಿ ಕೊರತೆಯನ್ನು ಸರಿದೂಗಿಸಲು ಬೇರೆ ಬೇರೆ ಆಹಾರ ಪದಾರ್ಥ ಕೊಡಬಹುದು. ಒಂದೆರಡು ತಿಂಗಳು ತಡವಾದರೆ ಅಂತಹದ್ದೇನು ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಕೊರತೆಯನ್ನು ಸರಿದೂಗಿಸಲು ನಮಗೆ ಪರ್ಯಾಯ ಮಾರ್ಗಗಳು ಇವೆ. 5 ಕೆಜಿ ಈಗಾಗಲೇ ಕೊಡುತ್ತಿದ್ದೇವೆ. ಲೇಟಾದರೆ ಅಂತದೇನ್ ಸಮಸ್ಯೆ ಆಗಲ್ಲ ಎಂದರು.
ಇನ್ನು ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿದ್ದು, ಈಗಾಗಲೇ ವಿದ್ಯುತ್, ಶಕ್ತಿ ಯೋಜನೆ ಜಾರಿಗೆ ಬಂದಿದೆ, ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 15 ರವರೆಗೆ ಸಮಯ ಇದೆ. ಮೂರು ಪ್ರಮುಖ ಗ್ಯಾರಂಟಿಗಳು ಜಾರಿಯಾಗಿವೆ, ಆತಂಕ ಇಲ್ಲ ಎಂದಿದ್ದಾರೆ.