ಮೈಸೂರು, ಜೂ 26 (DaijiworldNews/MS): ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ಹಾಗೂ ಮೈಸೂರಿನ ಖ್ಯಾತ ಪತ್ರಕರ್ತರ ಮಗನ ನಡುವೆ ಸಾರ್ವಜನಿಕವಾಗಿ ಕುವೆಂಪು ನಗರದ ಕೆಫೆ ಬಿರಿಯಾನಿ ಹೋಟೆಲ್ ಮುಂದೆ ಮಾರಾಮಾರಿ ನಡೆದಿದೆ.
ಸಾ.ರಾ.ಮಹೇಶ್ ಪುತ್ರ ಜಯಂತ್ ಹಾಗೂ ಪತ್ರಕರ್ತ ಗುರುರಾಜ್ ಪುತ್ರನ ನಡುವೆ ಗಲಾಟೆಯಾಗಿದೆ.
ಇಬ್ಬರು ಕೂಡ ಪರಸ್ಪರ ಕೈಕೈ ಮಿಲಾಯಿಸಿಕೊಂಡಿರುವ ದೃಶ್ಯ ವೈರಲ್ ಆಗಿದೆ. ಗಲಾಟೆ ದೊಡ್ಡದಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಕೂಡ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪತ್ರ ಬರೆದು ಬುದ್ದಿ ಹೇಳಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಲಾಟೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.