ಬೆಂಗಳೂರು, ಜೂ 27 (DaijiworldNews/MS): ಸಿಕಲ್ ಸೆಲ್ ಅನಿಮೀಯಾ ನಿರ್ಮೂಲನಾಗಾಗಿ ಕರ್ನಾಟಕ ಸೇರಿ 17 ರಾಜ್ಯಗಳ 278 ಜಿಲ್ಲೆಗಳಲ್ಲಿ ಜಾರಿಗೊಳ್ಳುವ ವಿಶೇಷ ಆರೋಗ್ಯ ಅಭಿಯಾನಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ಕಾಯಿಲೆ. ಅತೀ ಹೆಚ್ಚು ಬುಡಕಟ್ಟು ಜನಾಂಗಗಳ ಮಕ್ಕಳಲ್ಲಿ ಕಂಡುಬರುತ್ತಿದೆ.
ಸಿಕಲ್ ಸೆಲ್ ಅನೀಮಿಯಾ ರೋಗಿಯ ರಕ್ತಕಣಗಳು 10ರಿಂದ 12ದಿನಗಳಲ್ಲಿ ನಶಿಸುವುದರಿಂದ ರೋಗಿಗೆ ರಕ್ತಹೀನತೆ, ಪದೇಪದೇ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ವಾಸಿಯಾಗದ ಹುಣ್ಣುಗಳು, ಲಕ್ವ, ಕಾಮಾಲೆ ರೋಗ ಲಕ್ಷಣಗಳು ಕಂಡುಬರುತ್ತದೆ.
ಸಾರ್ವಜನಿಕರು YouTube channel/DD channel ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.