ಮಧ್ಯಪ್ರದೇಶ, ಜೂ 27 (DaijiworldNews/MS): ಧರ್ಮ, ಲಿಂಗ, ಲಿಂಗ ಮತ್ತು ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಒಂದೇ ವೈಯಕ್ತಿಕ ಕಾನೂನು ಅಗತ್ಯ ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ನರೇಂದ್ರ ಮೋದಿ ಬ್ಯಾಟ್ ಬೀಸಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ “ಮೇರಾ ಬೂತ್ ಸಬ್ಸೆ ಮಜ್ಬೂತ್” ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಇಸ್ಲಾಂನಲ್ಲಿ ‘ತ್ರಿವಳಿ ತಲಾಖ್’ ಅದರ ಭಾಗವಾಗಿದ್ದರೆ, ಬಹುತೇಕ ಮುಸ್ಲಿಂ ರಾಷ್ಟ್ರಗಳು ಈಗಾಗಲೇ ಇದನ್ನು ರದ್ದುಗೊಳಿಸಿರುವಾಗ ಭಾರತದಲ್ಲಿ ಇಂತಹ ಪದ್ಧತಿ ಏಕೆ ಅಸ್ತಿತ್ವದಲ್ಲಿದೆ ಎಂದು ಅವರು ಆಶ್ಚರ್ಯಪಟ್ಟಿದ್ದಾರೆ
ಈಜಿಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಬಹುಪಾಲು ಮುಸ್ಲಿಂ ರಾಷ್ಟ್ರಗಳಲ್ಲೇಕೆ ಆಚರಿಸಲಾಗುತ್ತಿಲ್ಲ. ಶೇ. 90ರಷ್ಟು ಸುನ್ನಿ ಮುಸ್ಲಿಮರಿರುವ ಈಜಿಪ್ಟ್ 80 ರಿಂದ 90 ವರ್ಷಗಳ ಹಿಂದೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ವಿರೋಧಿಸುವವರು ತಮ್ಮ ಹಿತಾಸಕ್ತಿಗಳಿಗಾಗಿ ಕೆಲವರನ್ನು ಪ್ರಚೋದಿಸುತ್ತಿದ್ದಾರೆ. ಯಾವ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಅವರನ್ನು ಪ್ರಚೋದಿಸುತ್ತಿವೆ ಮತ್ತು ನಾಶಪಡಿಸುತ್ತಿವೆ ಎಂಬುದನ್ನು ಭಾರತೀಯ ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.