ನವದೆಹಲಿ, ಜೂ 28 (DaijiworldNews/MS): 'ಭಾರತ್ ಜೋಡೋ ಯಾತ್ರೆ'ಯ ಮೂಲಕ ಸಾರ್ವಜನಿಕ ಸಂಪರ್ಕ ಆಂದೋಲನವನ್ನು ಮುಂದುವರಿಸಿರುವ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಜನರ ನಡುವೆ ಬೆರೆತಿದ್ದಾರೆ.
ಮಂಗಳವಾರ ದೆಹಲಿಯ ಕರೋಲ್ ಬಾಗ್ನಲ್ಲಿರುವ ಬೈಕ್ ಗ್ಯಾರೇಜ್ ಗಳ ಬಳಿ ತೆರಳಿ ಮೆಕ್ಯಾನಿಕ್ ಗಳ ಜೊತೆ ಬೆರೆತು ಮಾತನಾಡಿದ್ದಾರೆ. ಸ್ವಲ್ಪ ಕಾಲ ಬೈಕ್ ರಿಪೇರಿ ಕೆಲವು ಮಾಹಿತಿ ಕಲಿತು ಮೆಕ್ಯಾನಿಕ್ ಗಳಿಗೆ ಅವರ ಕೆಲಸದಲ್ಲಿ ಸಹಾಯ ಮಾಡಿದ್ದಾರೆ.
ಕಾಂಗ್ರೆಸ್ ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಕೈಗಳು ಭಾರತವನ್ನು ನಿರ್ಮಿಸುತ್ತವೆ ಎಂದು ಶೀರ್ಷಿಕೆ ನೀಡಿದ್ದಾರೆ.
ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ಕೂಡಾ ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದುಈ ಕೈಗಳು ಭಾರತವನ್ನು ನಿರ್ಮಿಸುತ್ತವೆ. ಈ ಬಟ್ಟೆಗಳ ಮೇಲಿನ ಗ್ರೀಸ್ ನಮ್ಮ ಸ್ವಾಭಿಮಾನ ಮತ್ತು ಹೆಮ್ಮೆಯ ಮೂಲವಾಗಿದೆ. ಅಂತಹ ಕೈಗಳನ್ನು ಪ್ರೋತ್ಸಾಹಿಸಲು ಜನರ ನಾಯಕ ಮಾತ್ರ ಕೆಲಸ ಮಾಡುತ್ತಾರೆ. ದೆಹಲಿಯ ಕರೋಲ್ ಬಾಗ್ನಲ್ಲಿ ಬೈಕ್ ಮೆಕಾನಿಕ್ಗಳೊಂದಿಗೆ ರಾಹುಲ್ ಗಾಂಧಿ. 'ಭಾರತ್ ಜೋಡೋ ಯಾತ್ರೆ' ಮುಂದುವರಿಯುತ್ತದೆ" ಎಂದು ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೇ 23 ರಂದು ಟ್ರಕ್ನಲ್ಲಿ ಚಲಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟರ್ನಲ್ಲಿ ಕುಳಿತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.