ಬೆಂಗಳೂರು, ಜೂ 28 (DaijiworldNews/SM): ಕೇರಳದಲ್ಲಿ ನಂದಿನಿ (Nandini Milk) ಹಾಲಿನ ಡೈರಿಯ ವಿಸ್ತರಣೆ ಮಾಡುವ ಕೆಎಂಎಫ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ವಿಸ್ತರಣೆ ಯೋಜನೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೇರಳ ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ ಚಿಂಚುರಾಣಿ ಅವರು ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸಿಇಒ ಅವರಿಂದ ಕೇರಳದ ಹಾಲಿನ ಡೈರಿಗಳಲ್ಲಿ ನಂದಿನಿ ಬ್ರಾಂಡ್ನ ಹಾಲುಗಳನ್ನು ಮಾರಾಟದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
ಕೇರಳದಲ್ಲಿ ನಂದಿನಿ ಹಾಲಿನ ಡೈರಿಯ ವಿಸ್ತರಣೆ ಮಾಡದಂತೆ ಕೇರಳ ಸರ್ಕಾರ ಈ ಹಿಂದೆಯೇ ಒಂದು ಆದೇಶವನ್ನು ನೀಡಿತ್ತು. ಇದು ಕರ್ನಾಟಕದ ಮತ್ತು ಕೇರಳದ ನಡುವೆ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಕೇರಳ ಸರ್ಕಾರ ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ, KMF ಸಿಇಒ ಜತೆಗೆ ಮಾತುಕತೆ ನಡೆಸಿದೆ. ಪರಿಣಾಮ ನಂದಿನಿ (Nandini Milk) ಹಾಲಿನ ಡೈರಿಯ ವಿಸ್ತರಣೆ ಮಾಡುವ ಕೆಎಂಎಫ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ವಿಸ್ತರಣೆ ಯೋಜನೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿಯನ್ನು KMFನ ಸಿಇಒ ಹೇಳಿದ್ದಾರೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ