ಚಿಕ್ಕಮಗಳೂರು, ಜು 01 (DaijiworldNews/HR): ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್ಲೈನ್ ಇಲ್ಲ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್ ನೀಡಲಾಗುತ್ತದೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್ಲೈನ್ ಇಲ್ಲ. ಗೃಹಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.
ಇನ್ನು ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ತಿಂಗಳಿಗೆ ಬರುತ್ತೆ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್. ಗೃಹಜ್ಯೋತಿಗೆ ಅರ್ಜಿ ಹಾಕದಿದ್ದರೆ ಮುಂದಿನ ತಿಂಗಳು ಬಿಲ್ ಬರುತ್ತದೆ ಎಂದಿದ್ದಾರೆ.
ಗೃಹಜ್ಯೋತಿ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಆದಷ್ಟು ಬೇಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಒಳ್ಳೆಯದು ಎಂದು ಸಚಿವರು ತಿಳಿಸಿದ್ದಾರೆ.