ಚಿಕ್ಕಮಗಳೂರು, ಜು 01 (DaijiworldNews/HR): ಗ್ಯಾರಂಟಿ ಗೊಂದಲಗಳ ಬಗ್ಗೆ ಬಜೆಟ್ ವೇಳೆ ಎಲ್ಲಾ ಚರ್ಚೆ ಆಗುತ್ತದೆ. ಗ್ಯಾರಂಟಿಗಳನ್ನ ಗೊಂದಲದ ಗೂಡು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನೋಡೋಣ ಏನೇನು ಮಾಡ್ತಾರೆ, 200 ಯೂನಿಟ್ ಅಂದ್ರು, ವರ್ಷದ ಸರಾಸರಿ ಅಂದರು ನೋಡೋಣ. ಬಹಳ ಗೊಂದಲ ಮಾಡಿ, ಪವರ್ ರೇಟ್ ಕೂಡ ಹೆಚ್ಚು ಮಾಡಿದ್ದಾರೆ ಜನರಿಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡಿದ್ದಾರೆ ಎಂದರು.
ಇನ್ನು ಬಿಜೆಪಿ ನೋಟೀಸ್ ಕ್ಯಾರೇ ಅನ್ನದ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಾ ಬೆಂಗಳೂರಿನಲ್ಲೇ ಮಾತನಾಡ್ತೀವಿ. ನಾವು ಬಂದಿರೋದು ಅಶೋಕ್ ಹುಟ್ಟುಹಬ್ಬ ಆಚರಣೆಗೆ ಅಷ್ಟೆ ಎಂದರು.