ಕೊಪ್ಪಳ, ಜು1 (DaijiworldNews/MS): ಧರ್ಮಕ್ಕಾಗಿ ರಸ್ತೆಯಲ್ಲಿ ರಕ್ತದ ಕೋಡಿ ಹರಿಸೋದು ಧರ್ಮವಲ್ಲ, ಆದರೆ ರಸ್ತೆಯಲ್ಲಿ ಒದ್ದಾಡುವವನಿಗೆ ರಕ್ತ ನೀಡುವುದು ಧರ್ಮ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಅವರು ಕೊಪ್ಪಳದ ಕುಕನೂರು ಬಾನಾಪುರದಲ್ಲಿ ಮಸೀದಿ ಉದ್ಘಾಟನೆ ಮಾತನಾಡಿ , ಸೂರ್ಯನ ಬೆಳಕಿಗೆ ಗಾಳಿಗೆ ಇಲ್ಲದ ಧರ್ಮ ಮನುಷ್ಯನಿಗೆ ಯಾಕೆ? ಸೌಹಾರ್ದಯುತವಾಗಿ ಬಾಳುವುದು ಧರ್ಮ. ಹಣ್ಣು ತಿಂದು ಸಿಪ್ಪೆ ಎಸೆಯುವುದು ಧರ್ಮವಲ್ಲ. ಎಸೆದಿರುವ ಸಿಪ್ಪೆ ಸ್ವಚ್ಛಗೊಳಿಸುವುದು ಧರ್ಮ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೆ ಇರೋದು ಧರ್ಮ ಎಂದು ಹೇಳಿದ್ದಾರೆ.
ಈ ಊರಿನಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು ಇವರಿಗಾಗಿ ಎಲ್ಲಾ ಧರ್ಮದವರು ಸೇರಿ ಮಸೀದಿ ನಿರ್ಮಾಣ ಮಾಡಿರುವುದು ವಿಶೇಷ.