ಮುಂಬೈ, ಜು 04 (DaijiworldNews/HR): ನಟ ಶಾರುಖ್ ಖಾನ್ ಅವರಿಗೆ ಶೂಟಿಂಗ್ ವೊಂದರಲ್ಲಿ ಪೆಟ್ಟು ಬಿದ್ದಿರುವ ಕುರಿತು ವರದಿಯಾಗಿದೆ.
ಲಾಸ್ ಏಂಜಲೀಸ್ನಲ್ಲಿ ಬಹಿರಂಗವಾಗದಿರುವ ಪ್ರಾಜೆಕ್ಟ್ ವೊಂದರ ಶೂಟಿಂಗ್ ನಲ್ಲಿರುವಾಗ ನಟ ಶಾರುಖ್ ಖಾನ್ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ.
ಇನ್ನು ತಕ್ಷಣ ಚಿತ್ರತಂಡ ಅವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತ್ರಚಿಕಿತ್ಸೆಯನ್ನು ಮಾಡಿ, ಯಾವುದೇ ಹೆದರುವ ಅವಶ್ಯಕತೆಯಿಲ್ಲ ಎಂದು ಬ್ಯಾಂಡೇಜ್ ವೊಂದನ್ನು ಮೂಗಿಗೆ ಸುತ್ತಿ ಕಳುಹಿಸಿದ್ದಾರೆ.
ಸದ್ಯ ಶಾರುಖ್ ಅಲ್ಲಿಂದ ವಾಪಾಸ್ ಆಗಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.