ಬೆಂಗಳೂರು, ಜು 5 (DaijiworldNews/MS): ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಅಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ.
ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಟಿಕೆಟ್ ಮೌಲ್ಯದ ಹಣವನ್ನು ಪ್ರತಿ ತಿಂಗಳ ಅಂತ್ಯದೊಳಗೆ ಸಾರಿಗೆ ನಿಗಮಗಳಿಗೆ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿಗಮಗಳು ನಿರ್ಧರಿಸಿವೆ.
ಇನ್ನೊಂದೆಡೆನಿಗಮಗಳ ಸರಾಸರಿ ದೈನಂದಿನ ಆದಾಯ 24.5 ಕೋಟಿಯಿಂದ 28.9 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 84.9 ಲಕ್ಷದಿಂದ 1 ಕೋಟಿಗೂ ಅಧಿಕವಾಗಿದೆ ಎನ್ನಲಾಗಿದ್ದು ಈ ಯೋಜನೆಯಡಿ ಜೂ.44ರಿಂದ 30ರವರೆಗೆ 1.45 ಕೋಟಿ ಮಹಿಳೆಯರು ಸಂಚರಿಸಿದ್ದು, ಟಿಕೆಟ್ ಮೌಲ್ಯ 248.30 ಕೋಟಿ ರೂ. ಆಗಿದೆ. ಜುಲೈ ೨೧ರಂದು ಸರ್ಕಾರದ ಬಜೆಟ್ಗೆ ಅನುಮೋದನೆ ದೊರೆಯಲಿದ್ದು, ಅಲ್ಲಿವರೆಗೆ ಹಣ ಪಾವತಿ ಸಾಧ್ಯವಿಲ್ಲ. ಹೀಗಾಗಿ, ಜೂನ್ ತಿಂಗಳ ಟಿಕೆಟ್ ಮೊತ್ತ ಪಾವತಿ ವಿಳಂಬವಾಗಲಿದೆ.