ಬೆಂಗಳೂರು, ಜು 06 (DaijiworldNews/HR): ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲೂ ವರ್ಗಾವಣೆ ದಂಧೆ ನಡೆದಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಕ್ಕಳಿಂದ ಅಧಿಕಾರ ದುರ್ಬಳಕೆ ಆಗಿದ್ದರೇ ನನ್ನ ಮಕ್ಕಳು ಭಾಗಿಯಾಗಿದ್ದ ಬಗ್ಗೆ ದಾಖಲೆ ನೀಡಿ ಸಾಬೀತಾದರೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದ್ದನ್ನು ನಾನು ನೋಡಿಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಯಾವತ್ತಾದರೂ ದಾಖಲೆ ಬಿಡುಗಡೆ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಪೈನ್ ಡ್ರೈವ್ ಅಸ್ತ್ರ ವಿಚಾರವಾಗಿ ಮಾತನಾಡಿದ ಅವರು, ಹೆದರಿ ಓಡೋಗಲ್ಲ, ಹಿಟ್ ಅಂಡ್ ರನ್ ಮಾಡಲ್ಲ. ಕಾಂಗ್ರೆಸ್ ನಾಯಕರು ಏನು ಮಾತಾಡ್ತಾರೆ ನೋಡೋಣ. ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ನಲ್ಲಿ ಮಾಡಿಸಿದ್ದಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು ಅಂತ ಹೇಳಬೇಕಲ್ಲ ಎಂದರು.