ಬೆಂಗಳೂರು, ಜು 07 (DaijiworldNews/HR): ವಿ.ವಿ.ಪುರ ಠಾಣೆಯ ಪೊಲೀಸರು ನೀರಿನಲ್ಲಿ ಡ್ರಗ್ಸ್ ಬೆರೆಸಿ ಮಾರುತ್ತಿದ್ದ ಜಾಲ ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಗುಲಾಂಸಿಂಗ್ ಬಂಧಿತ ಆರೋಪಿ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ರಾಜಸ್ಥಾನ್ನ ಗುಲಾಂಸಿಂಗ್, ಕೆಲಸ ಹುಡುಕಿಕೊಂಡು ಬೆಂಗಳೂರಿನಲ್ಲಿ ಬಂದು ನೆಲೆಸಿ ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿದ್ದ. ಈತನ ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಇನ್ನು ಬಂಧಿತ ಆರೋಪಿಯಿಂದ 60 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ತನ್ನೂರಿನಲ್ಲಿರುವ ಪೆಡ್ಲರ್ಗಳ ಜೊತೆ ಒಡನಾಟ ಹೊಂದಿದ್ದು, ಕೋರಿಯರ್ ಮೂಲಕ ಡ್ರಗ್ಸ್ ತರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ನೀರಿನ ಬಾಟಲಿ ರೂಪದಲ್ಲಿ ಡ್ರಗ್ಸ್ ಮಾರುತ್ತಿದ್ದ ಎಂದು ತಿಳಿದು ಬಂದಿದೆ.
ಡ್ರಗ್ಸ್ ಮಿಶ್ರಣವಿರುತ್ತಿದ್ದ ನೀರಿನ ಬಾಟಲಿಗಳನ್ನು ಆರೋಪಿ ಗ್ರಾಹಕರಿಗೆ ಮಾರುತ್ತಿದ್ದು, ಇದರಿಂದಾಗಿ ಡ್ರಗ್ಸ್ ಮಾರಾಟದ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ನೀರಿನ ಬಾಟಲಿ ಮಾರಾಟಕ್ಕೆಂದು ಆರೋಪಿ ವ್ಯವಸ್ಥಿತ ಜಾಲ ರೂಪಿಸಿಕೊಂಡಿದ್ದ ಎನ್ನಲಾಗಿದೆ.