ಬೆಂಗಳೂರು, ಜು 7 (DaijiworldNews/MS): ರಾಜ್ಯ ಸರ್ಕಾರದ ಇಂದು ಬಜೆಟ್ ಮಂಡನೆ ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ 14ನೇ ಬಜೆಟ್ ಇದಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ 7ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ನ ನಿರ್ಧಾರ ಸದನದ ಗೌರವಕ್ಕೆ ಧಕ್ಕೆ ತರುವಂತಾಗಿದ್ದು ಇನ್ನು ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ.
ಈ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ಮಾಡಿ ಲೇವಡಿ ಮಾಡಿದ್ದು, "ನಮ್ಮ ಸರ್ಕಾರ ರಚನೆಯಾಗಿ, ಗ್ಯಾರಂಟಿಗಳು ಜಾರಿಯಾಗಿ, ಅಧಿವೇಶನ ಶುರುವಾಗಿದೆ, ಬಜೆಟ್ ಮಂಡನೆಯೂ ಆರಂಭವಾಗಿದೆ.“ವಿರೋಧ ಪಕ್ಷದ ನಾಯಕ"ನ ಕುರ್ಚಿ ಮಾತ್ರ ಇನ್ನೂ ಖಾಲಿ ಇದೆ.ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ನುಡಿಯುತ್ತಿದೆ.ಬಿಜೆಪಿ ವಿಪಕ್ಷ ನಾಯಕನ ಹುದ್ದೆಯನ್ನು ವ್ಯಾಪಾರಕ್ಕೆ ಇಟ್ಟಿರುವ ಅನುಮಾನವಿದೆ!ವ್ಯವಹಾರ ಇನ್ನೂ ಕುದುರಲಿಲ್ಲವೇ " ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಇನ್ನುಎರಡು ದಿನಗಳ ಹಿಂದೆಯೇ ಬಿಜೆಪಿಯ ಹೈಕಮಾಂಡ್ ವತಿಯಿಂದ ವೀಕ್ಷಕರು ರಾಜ್ಯಕ್ಕೆ ಬಂದು ಹೋದರೂ, ಇನ್ನೂ ಪ್ರತಿಪಕ್ಷ ನಾಯಕನ ಆಯ್ಕೆ ಮಾತ್ರ ಆಗದಿರುವುದು ವಿಪರ್ಯಾಸ.!