ಬೆಂಗಳೂರು, ಜು 8 (DaijiworldNews/MS): ಸಿಲ್ಕ್ ಬೋರ್ಡ್ನಿಂದ ಮಡಿವಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕಾಮಗಾರಿಗೆ ಬಳಸುವ ಕ್ರೇನ್ ಏಕಾಏಕಿ ನೆಲಕ್ಕೆ ಉರುಳಿ ಬಿದ್ದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಲ್ಲ ಎಂದು ವರದಿಯಾಗಿದೆ.
ಈ ರೀತಿ ಮೆಟ್ರೋ ಕಾಮಗಾರಿ ಅವಾಂತರಗಳು ಇದೇ ಮೊದಲಲ್ಲ. ಮೆಟ್ರೊ ಫಿಲ್ಲರ್ ರಸ್ತೆ ಮೇಲೆ ಬಿದ್ದು ತಾಯಿ ಮತ್ತು ಮಗು ಮೃತಪಟ್ಟ ದುರಂತ ನೆನಪು ಮಾಸುವ ಮುನ್ನವೇ ಈ ಅವಘಡ ನಡೆದಿದೆ.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಜಾರಿ ಬಿಳ್ಳಲು ಕಾರಣ ಏನು ಎಂಬುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.