ಪಶ್ಚಿಮ ಬಂಗಾಳ, ಜು 08 (DaijiworldNews/HR): ಅಪರಿಚಿತ ಯುವಕಯೊಬ್ಬ ಮತಪೆಟ್ಟಿಗೆಯನ್ನೇ ಹಿಡಿದುಕೊಂಡು ಓದಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಹಾರ್ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಮತದಾದರೂ ಸರತಿ ಸಾಲಿನಲ್ಲಿ ನಿಂತು ಮತದಾನ ನಡೆಸುತ್ತಿದ್ದರು ಅಷ್ಟೋತ್ತಿಗಾಗಲೇ ಯುವಕನೊಬ್ಬ ಮತಗಟ್ಟೆಯಲ್ಲಿದ್ದ ಮತ ಪೆಟ್ಟಿಗೆಯನ್ನು ಹಿಡಿದು ಓಡಿಹೋಗಿದ್ದಾನೆ.
ಇನ್ನು ಈತ ಓಡಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದ್ದು ಇಲ್ಲಿ ನಕಲಿ ಮತದಾನ ನಡೆದಿದೆ ಎಂದು ಇಲ್ಲಿನ ಮತದಾರರು ಕುಪಿತಗೊಂಡು ಉಂಟಾದ ಘರ್ಷಣೆ ವೇಳೆ ಕೂಚ್ ಬೆಹಾರ್ ಜಿಲ್ಲೆಯ ದಿನ್ಹಟಾದ ಬರನಾಚಿನಾ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಕೂಚ್ ಬೆಹಾರ್ನ ಮಠಭಂಗದಲ್ಲಿ ಯುವಕನೊಬ್ಬ ಮತಪೆಟ್ಟಿಗೆಯನ್ನೇ ಕಸಿದುಕೊಂಡು ಪರಾರಿಯಾಗಿದ್ದಾನೆ.