ಪಶ್ಚಿಮ ಬಂಗಾಳ, ಜು 11 (DaijiworldNews/HR): ಹಿಂಸಾಚಾರದ ನಡುವೆ ಚುನಾವಣೆ ಮುಗಿದಿದ್ದ ಪಶ್ಚಿಮ ಬಂಗಾಳದಲ್ಲಿ ಇಂದು ಮತಎಣಿಕೆ ಕೇಂದ್ರದ ಹೊರಗೆ ಬಾಂಬ್ ಸ್ಫೋಟಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಯ ಮತ ಎಣಿಕೆನಡೆಯುತ್ತಿದ್ದು, ಇದೇ ವೇಳೆ ಮತ ಎಣಿಕೆ ಕೇಂದ್ರದ ಹೊರಗೆ ದೇಶಬಾಂಬ್ ಎಸೆಯಲಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜುಲೈ 8ರಂದು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆದಿದ್ದು, ಆ ದಿನ ಉದ್ವಿಗ್ನತೆ ಸೃಷ್ಟಿಯಾಗಿದ್ದರಿಂದಾಗಿ ಜುಲೈ 10 ರಂದು 696 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.
ಇಂದು ಬಿಗಿ ಭದ್ರತೆಯ ನಡೆವೆ ಮತ ಎಣಿಕೆ ನಡೆದಿದ್ದರೂ ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಸ್ಫೋಟ ನಡೆದಿದೆ.