ಬೆಳಗಾವಿ, ಜು 13 (DaijiworldNews/HR): ಹಾಡಹಗಲೇ ಟ್ಯೂಷನ್ಗೆ ಹೊರಟಿದ್ದ ಬಾಲಕಿಯ ಅಪಹರಣ ಯತ್ನಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಮಾರುತಿ ನಗರದ ಗಜಾನನ್ ಪಾಟೀಲ್ (40) ಬಂಧಿತ ಆರೋಪಿ.
ಹಾಡಹಗಲೇ ಟ್ಯೂಷನ್ಗೆ ಹೊರಟಿದ್ದ ಬಾಲಕಿಯನ್ನು ಆರೋಪಿಯು ಹೆಗಲ ಮೇಲೆ ಹೊತ್ತೋಯ್ಯುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಾಲಕಿಯ ಚಿರಾಟ ಕೇಳಿ ಸ್ಥಳೀಯ ನಿವಾಸಿಗಳು ಆರೋಪಿಯ ಬೆನ್ನೆತ್ತಿದ್ದಾಗ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ತಪ್ಪಿಸಿಕೊಂಡಿದ್ದ. ಬಳಿಕ ದೂರು ದಾಖಲಾಗಿ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಆರೋಪಿಯನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಕೃತ್ಯದ ಹಿಂದಿನ ಉದ್ದೇಶ ಕೇಳಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ.
ನನಗೆ ಮದುವೆ ಆಗಿರಲಿಲ್ಲ. ಹಾಗಾಗಿ ಬಾಲಕಿಯ ಅಪಹರಣಕ್ಕೆ ಮುಂದಾಗಿದ್ದೆ ಎಂದಿದ್ದಾನೆ. ಈತನ ವರ್ತನೆಯಿಂದ ಆತನ ತಾಯಿ, ಸಹೋದರ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಬುದ್ಧಿ ಕಲಿಯದ ಗಜಾನನ್ ಗಲ್ಲಿ ಗಲ್ಲಿ ಸುತ್ತಾ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು.
ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಇನ್ನು ಟ್ಯೂಶನ್ಗೆ ಹೋಗ್ತಿದ್ದ ವಿದ್ಯಾರ್ಥಿನಿಯನ್ನ ಹಿಂಬಾಲಿಸಿದ್ದ ಗಜಾನನ್ ಆಕೆಯನ್ನು ಅಡ್ಡಗಟ್ಟಿ ಆಮೇಲೆ ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದನು. ಬಾಲಕಿ ಕಿರುಚಾಟ ಕೇಳಿ ಜನರು ಬರುತ್ತಿದ್ದಂತೆ ಬಾಲಕಿಯನ್ನು ಬಿಟ್ಟು ಗಜಾನನ್ ಪರಾರಿಯಾಗಿದ್ದ.