ಬೆಂಗಳೂರು, ಜು 13 (DaijiworldNews/SM): ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರು ಗರಂ ಆಗಿರುವ ಘಟನೆ ಜುಲೈ 13ರ ಗುರುವಾರದಂದ ವರದಿಯಾಗಿದೆ.
ಬೆಳಗ್ಗೆ ಸದನ ನಡೆಯುತ್ತಿದ್ದ ಸಂದರ್ಭದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡ್ತೇವೆ ಎಂಬ ಹೇಳಿಕೆಯನ್ನು ಶಿವಲಿಂಗೇಗೌಡ ಹೇಳಿಕೆಗೆ ಶಾಸಕ ವೇದವ್ಯಾಸ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದು, ಸುಳ್ಳು ಯಾಕೆ ಹೇಳುತ್ತೀರಿ. ಸತ್ಯ ಮಾತನಾಡಿ ಎಂದು ಏರುಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಂದೆಡೆ ಸದನದಲ್ಲಿ ಪ್ರಧಾನಿ ಮೋದಿ ‘೧೫ ಲಕ್ಷ’ ಹೇಳಿಕೆ ವಿಚಾರ ಚರ್ಚೆ ನಡೆಯುತ್ತಿದ್ದಾಗ ಇದಕ್ಕೆ ಬಿಜೆಪಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಕೋನ ರೆಡ್ಡಿ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಶಾಸಕ ಕೋನ ರೆಡ್ಡಿ ಪ್ರಸ್ತಾಪಕ್ಕೆ ಶಾಸಕ ಭರತ್ ಶೆಟ್ಟಿ ಗರಂ ಆಗಿದ್ದಾರೆ. ಮೋದಿ ಹೇಳಿದ್ದಕ್ಕೆ ಪುರಾವೆ ನೀಡಿ ಎಂದ ಶಾಸಕ ಭರತ್ ಶೆಟ್ಟಿ ಪ್ರತಿ ಸವಾಲು ಹಾಕಿದ್ದಾರೆ. ಹಿಂದಿ ತಿಳ್ಕೊಳ್ಳಿ ಇಲ್ಲದಿದ್ದರೆ ಕನ್ನಡಕ್ಕೆ ಪರಿವರ್ಸಿಕೊಳ್ಳಿ ಎಂದು ಕೋನ ರೆಡ್ಡಿ ಹೇಳಿಕೆಗೆ ಶಾಸಕ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.