ನವದೆಹಲಿ, ಜು 14 (DaijiworldNews/HR): ತಮ್ಮ ಸಂವಿಧಾನದ ಬಗ್ಗೆ ಭಾರತದಲ್ಲಿ ವಾಸಿಸುವ ಮುಸ್ಲಿಮರು ಹೆಮ್ಮೆಪಡುತ್ತಾರೆ ಎಂದು ವಿಶ್ವ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭಾರತದಲಿ ಮುಸ್ಲಿಂಮರು ಸಹ ನಾಗರಿಕರೊಂದಿಗೆ ಸಹೋದರ ಸಂಬಂಧವನ್ನು ಹೊಂದಿದ್ದಾರೆ. ಕೆಲ ಭಿನ್ನಾಭಿಪ್ರಾಯಗಳು ದೇಶದಲ್ಲಿ ಇರಬಹುದು. ಆ ಸಮಸ್ಯೆಗಳನ್ನು ಸಂವಿಧಾನದೊಳಗೆ ಅವರು ಹಂಚಿಕೊಳ್ಳುವ ಪ್ರೀತಿ ಹಾಗೂ ಸಹೋದರತ್ವದ ಚೌಕಟ್ಟಿನಲ್ಲಿ ಚರ್ಚಿಸಬೇಕು ಎಂದರು.
ಇನ್ನು ಭಾರತದ ಭೇಟಿ ನಮ್ಮ ಸ್ನೇಹಿತರ ಭೇಟಿಯಾಗಿದ್ದು, ಈ ಭೇಟಿಯ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಈ ಭೇಟಿಯ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಭೆಗಳನ್ನು ನಡೆಸಿದ್ದೇವೆ ಎಂದಿದ್ದಾರೆ.
ಇಸ್ಲಾಂ ಹಾಗೂ ಭಯೋತ್ಪಾದನೆ ಒಂದಕ್ಕೊಂದು ಸಂಬಂಧ ಹೊಂದಿಲ್ಲ. ಭಯೋತ್ಪಾದಕರಿಗೆ ಯಾವುದೇ ಒಂದು ಧರ್ಮ ಅಥವಾ ದೇಶವಿಲ್ಲ. ಈ ಆಲೋಚನೆಗಳನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.