ಶ್ರೀಹರಿಕೋಟಾ, ಜು 14 (DaijiworldNews/MS): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35 ಕ್ಕೆ ನಿಗದಿತ ಉಡಾವಣೆಗೆ ಸಿದ್ಧವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ ಅಂತ್ಯದ ವೇಳೆಗೆ ಚಂದ್ರಯಾನ -3 ಮಿಷನ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಗ್ ಗುರಿಯನ್ನು ಹೊಂದಿದೆ.
2019ರಲ್ಲಿ ಚಂದ್ರಯಾನ 2 ಹೆಸರಿನಲ್ಲಿ ಮತ್ತೊಂದು ಪ್ರಯೋಗ ಮಾಡಲಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ‘ಚಂದ್ರಯಾನ-2’ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೇ ಅಪ್ಪಳಿಸಿ, ವೈಫಲ್ಯ ಕಂಡಿತ್ತು.
ಚಂದ್ರಯಾನ-3 ಉಪಗ್ರಹ ಎಲ್ ವಿಎಂ3 - ಎಂ4 ರಾಕೆಟ್ ನ್ನು ಹೊತ್ತು ಸಾಗಲಿದೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ನೌಕೆ ಚಂದ್ರನ ಕಕ್ಷೆ ಸೇರುತ್ತದೆ. ಚಂದ್ರನನ್ನು ತಲುಪಿದ ಬೆನ್ನಲ್ಲೇ ರೋವರ್ ಅನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನ ಶುರುಮಾಡಲಾಗುತ್ತದೆ.
ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದರೆ ಮೊದಲ ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಲ್ಲಿ ಸೂರ್ಯನ ಬೆಳಕು ಪ್ರವೇಶ ಮಾಡುವುದಿಲ್ಲ. ಇಲ್ಲಿ ಮೈನಸ್ ೨೩೦ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಎಲೆಕ್ಟ್ರಾನಿಕ್ ಉಪಕರಣ ಗಳು ಕಾರ್ಯವೆಸಗುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ
ಯಶಸ್ವಿ ಲ್ಯಾಂಡಿಂಗ್ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಈ ಸಾಧನೆಯನ್ನು ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.