ಭೋಪಾಲ್, ಜು 14 (DaijiworldNews/MS): ಭಾರತದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾ ಶುಕ್ರವಾರ ಭಾರೀ ಹಿನ್ನಡೆಯನ್ನು ಕಂಡಿದೆ. ದಕ್ಷಿಣ ಆಫ್ರಿಕಾದಿಂದ ತಂದ ಏಳನೇ ಚಿರತೆಯ ಮೃತಪಟ್ಟ ಬೆನ್ನಲ್ಲೇ ನಮೀಬಿಯಾದಿಂದ ಸ್ಥಳಾಂತರಗೊಂಡ ಚೀತಾ ಸೂರಜ್ ಕೂಡಾ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೃತಪಟ್ಟಿದೆ.
ಇದರೊಂದಿಗೆ ದೇಶದಲ್ಲಿ ಚೀತಾವನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಾಜೆಕ್ಟ್ ಆರಂಭವಾದ ಬಳಿಕ ಕಳೆದ ಐದು ತಿಂಗಳ ಅಂತರದಲ್ಲಿ ಒಟ್ಟು ಎಂಟು ಚೀತಾಗಳು ಮೃತಪಟ್ಟಿವೆ.
ದಕ್ಷಿಣ ಆಫ್ರಿಕಾ ಮೂಲದ ವಯಸ್ಕ ಗಂಡು ಚೀತಾ ಸೂರಜ್ನ ದೇಹವನ್ನು, ಶುಕ್ರವಾರ ಬೆಳಗ್ಗೆ ಗಸ್ತು ತಿರುಗುವ ತಂಡ ಪತ್ತೆ ಮಾಡಿತ್ತು. ಇದರ ಬೆನ್ನಲ್ಲಿಯೇ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ಆಘಾತಕ್ಕೆ ಒಳಗಾಗಿದ್ದಾರೆ.ಸೂರಜ್ ಸಾವಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.