ಬೆಂಗಳೂರು, ಜು 15 (DaijiworldNews/MS): ಈಗಾಗಲೇ ಸಾರ್ವಜನಿಕರ ನಿದ್ದೆಗೆಡಿಸಿರುವ ಟೊಮೆಟೋ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಶೀಘ್ರದಲ್ಲೇ ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎಂದು ಯೋಚಿಸುತ್ತಿದ್ದರೆ, ಸದ್ಯ ಈ ರೀತಿಯ ಬೆಳವಣಿಗೆ ನಡೆಯುವುದಿಲ್ಲ. ಟೊಮೆಟೋ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದೆ. ಟೊಮೆಟೋ ಬೆಲೆ ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದ್ದರೆ, ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯದಿಂದ ಟೊಮೊಟೋ ಬೆಳೆ ನಾಶವಾಗಿದೆ. ಕೆಲ ಪ್ರದೇಶಗಳಲ್ಲಿ ಬರದಿಂದಾಗಿ ಕೈಗೆ ಬಂದ ಫಸಲು ಹಾಳಾದ ಕಾರಣದಿಂದಲೂ ಟೊಮೆಟೋ ದರ ದುಬಾರಿಯಾಗಿದೆ.
ಹೀಗಾಗಿ ಸದ್ಯಕ್ಕೆ ಟೊಮೆಟೋ ಬೆಲೆ ಇಳಿಕೆ ಆಗಲ್ಲ, ಇನ್ನೂ 300 ರೂವರೆಗೆ ಕೇಜಿಗೆ ಏರಿಕೆಯಾಗುವ ಸಂಭವವಿದೆ ಎಂಬುದಾಗಿ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ