ಚಾಮರಾಜನಗರ, ಜು 15 (DaijiworldNews/HR): ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಗ್ಗಲಿ ಗುಂದಿ ಗ್ರಾಮದ ಸುಶೀಲ(6) ಮೃತ ಬಾಲಕಿ.
ಇನ್ನು ಬಲಕಿಯು ಮನೆಯ ಮುಂಭಾಗ ಆಟವಾಡುತ್ತಾ ಕುಳಿತಿದ್ದಳು ಈ ಸಂದರ್ಭದಲ್ಲಿ ಚಿರತೆಯೊಂದು ಬಂದು ಮಗುವನ್ನು ಎಳೆದೊಯ್ದಿದೆ. ಈ ಸಂದರ್ಭದಲ್ಲಿ ಮಗುವಿನ ಚೀರಾಟವನ್ನು ಕೇಳಿ ಗ್ರಾಮಸ್ಥರು ಹೊರ ಬಂದಾಗ ಚಿರತೆ ಬಂದಿರುವುದನ್ನು ಕಂಡು ಜೋರಾಗಿ ಕೂಗಾಡಿದ್ದಾರೆ .ಈ ವೇಳೆ ಚಿರತೆ ಬಾಲಕಿಯನ್ನು ಗಾಯಗೊಳಿಸಿ ಬಿಟ್ಟು ಹೋಗಿದೆ.
ಕೂಡಲೇ ಗಾಯಾಳು ಬಾಲಕಿಯನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀದಿ ಬಳಿಕ ತೀವ್ರ ರಕ್ತಸ್ರಾವವಾಗುತ್ತಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.