ಹೈದರಾಬಾದ್, ಜು 16 (DaijiworldNews/AK) ಹಿಮಾಯತ್ ನಗರ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ಗ್ರಾಹಕರೊಬ್ಬರ 7 ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ನಡೆದಿದೆ.
ಜುಲೈ 3 ರಂದು ಎಟಿಎಂನಲ್ಲಿ ಗ್ರಾಹಕರೊಬ್ಬರು ಹಣ ಠೇವಣಿ ಮಾಡುತ್ತಿದ್ದ ವೇಳೆ ಬಂದ ಇಬ್ಬರು ಆತನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಥಳಿಸಿ 7 ಲಕ್ಷ ರೂಪಾಯಿಯನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತ್ರಸ್ತದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಿಂದ .3.25 ಲಕ್ಷ ರೂ. ಹಣ, ಒಂದು ನಾಲ್ಕು ಚಕ್ರದ ವಾಹನ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧದ ಕಮಿಷನ್ಗೆ ಬಳಸಿದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಆರೋಪಿಗಳಾದ ಕೇರಳ ಮೂಲದ ತಾನ್ಸಿಫ್ ಅಲಿ (24), ಮುಹಮ್ಮದ್ ಸಹದ್ (26), ತನ್ನೀಹ್ ಬಾರಿಕ್ಕಲ್ (23), ಅಬ್ದುಲ್ ಮುಹೀಸ್ (23) ಅವರನ್ನು ಕಮಿಷನರ್ ಟಾಸ್ಕ್ ಫೋರ್ಸ್ ಮತ್ತು ದೋಮಲ್ಗುಡ ಪೊಲೀಸರು ಬಂಧಿಸಿದ್ದಾರೆ.