ನವದೆಹಲಿ, ಜು 17 (DaijiworldNews/MS): ಆನ್ಲೈನ್ ವಂಚನೆ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಿಮ್ ಕಾರ್ಡ್ ಸಂಖ್ಯೆ ಮಿತಿಗೊಳಿಸುವ ನಿಯಮ ಜಾರಿಗೆ ಮುಂದಾಗಿದೆ.
ಇಲ್ಲಿವರೆಗೆ ಒಂದು IDಗೆ 9 ಸಿಮ್ಕಾರ್ಡ್ ನೀಡಲಾಗುತ್ತಿತ್ತು. ಇನ್ನುಮುಂದೆ 4 ಸಿಮ್ಗಷ್ಟೇ ಅನುಮತಿ ನೀಡಲಾಗುತ್ತಿದೆ. ಇದರಿಂದ ಆನ್ಲೈನ್ ವಂಚನೆಗೆ ಬೇರೆ ಬೇರೆ ಸಿಮ್ ಕಾರ್ಡ್ ಬಳಸುವುದನ್ನು ತಪ್ಪಿಸಬಹುದು. ಈ ಕುರಿತ ಮಾರ್ಗಸೂಚಿಗೆ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದು, ಶ್ರೀಘ್ರ ನಿಯಮ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೇ ಅನಗತ್ಯ ಕರೆಗಳು ಮತ್ತು ವಂಚನೆ ಕರೆಗಳನ್ನು ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಲಿಕಾಂ ಕಂಪನಿ ಎಐ ಫಿಲ್ಟರ್ ಗಳನ್ನು ಸ್ಥಾಪಿಸಲು ಸಹಾಯ ಮಾಡುವುದು ಇದರಲ್ಲಿ ಸೇರಿದ್ದು, ಈ ಮೂಲಕ ಅಪರಿಚಿತ ಕರೆ, ಸಂದೇಶ ಇತಾದಿಗಳನ್ನು ನಿರ್ಬಂಧಿಸಬಹುದಾಗಿದೆ.