ನವದೆಹಲಿ, ಜು 19 (DaijiworldNews/HR): ಭಾರತದ ಯುವಕನೊಂದಿಗೆ ಬಾಂಗ್ಲಾದೇಶದ ಯುವತಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿ ಸ್ನೇಹ ಏರ್ಪಟ್ಟಿ ಭಾರತಕ್ಕೆ ಬಂದು ಪ್ರಿಯಕರನನ್ನು ಕರೆದುಕೊಂಡೇ ವಾಪಸ್ ಬಾಂಗ್ಲಾದೇಶಕ್ಕೆ ಹೋಗಿದ್ದು, ಇದೀಗ ಈಕೆ ಕಳಿಸಿದ ಫೋಟೊ ಬೆಚ್ಚಿ ಬೀಳಿಸುವಂತಿದೆ.
ಬಾಂಗ್ಲಾದೇಶದ ಜ್ಯೂಲಿ ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್ನ ಅಜಯ್ಗೂ ಫೇಸ್ಬುಕ್ನಲ್ಲಿ ಪರಿಚಯವಾಗಿ ಸ್ನೇಹ ಏರ್ಪಟ್ಟು ಇಬ್ಬರೂ ಪ್ರೀತಿಯನ್ನು ಹಂಚಿಕೊಂಡರು. ಆಕೆ ಇವನಿಗಾಗಿ ಅಲ್ಲಿಂದ ಭಾರತಕ್ಕೆ ಬಂದು ಬಳಿಕ ಅವನನ್ನೂ ಕರೆದುಕೊಂಡೇ ವಾಪಸ್ ಬಾಂಗ್ಲಾದೇಶಕ್ಕೆ ಹೋಗಿದ್ದಾಳೆ.
ಇನ್ನು ಯುವತಿಯು ಅಜಯ್ನನ್ನು ಬಾಂಗ್ಲಾಕ್ಕೆ ಕರೆದುಕೊಂದು ಹೋದ ಮೇಲೆ ಅಜಯ್ನ ಕೆಲವು ಫೋಟೋಗಳನ್ನು ಅವನ ಅಮ್ಮಂಗೆ ಕಳಿಸಿದ್ದಾಳೆ. ಅವೆಲ್ಲವೂ ಹೆದರಿಕೆ ಹುಟ್ಟಿಸುವಂತೆಯೇ ಇದೆ.
ಅಜಯ್ ರಕ್ತದಲ್ಲಿ ಮಡುವಲ್ಲಿ ಇರುವ ಫೋಟೋಗಳೂ ಇದ್ದು, ಹೀಗಾಗಿ ಮೊರಾದಾಬಾದ್ನಲ್ಲಿರುವ ಅವನ ಅಮ್ಮ ಭಯಭೀತರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇತ್ತೀಚೆಗೆ ಪಬ್ಜಿ ಆಟದ ಮೂಲಕ ಭಾರತದ ಯುವಕನೊಂದಿಗೆ ನಂಟು ಬೆಳೆಸಿದ ಸೀಮಾ ಹೈದರ್ ಎಂಬ ಮಹಿಳೆಯೊಬ್ಬಳು ಪಾಕಿಸ್ತಾನದಿಂದ ತನ್ನ 4 ಮಕ್ಕಳನ್ನು ಕರೆದುಕೊಂಡು ಬಂದು ತನಿಖಾ ದಳಗಳ ಕೈಗೆ ಸಿಲುಕಿ ಅದರ ತನಿಖೆ ನಡೆಯುತ್ತಿರುವಾಗಲೇ ಇದೀಗ ಮತ್ತೊಂದು ಘಟನೆ ನಡೆದಿದೆ.