ಬೆಂಗಳೂರು, ಜು 20 (DaijiworldNews/HR): ಬುಧವಾರದಂದು ವಿಧಾನಸಭೆಯಲ್ಲಿ ಬಿಜೆಪಿಯು ಅಶಿಸ್ತಿನಿಂದ ವರ್ತಿಸಿರುವ ಘಟನೆ ನಾವೆಲ್ಲ ತಲೆ ತಗ್ಗಿಸುವಂತಹದ್ದು ಎಂದು ಮಾಜಿ ಸಚಿವರೂ ಆಗಿರುವ ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ ಕೊಟ್ಟಿರೋ ವಿಧಾನಸೌಧ ಬಹಳ ಪವಿತ್ರವಾದದ್ದು ಅಂತ ತಲೆ ಬಾಗಿ ಒಳಗೆ ಬರ್ತೀವಿ. ನಾವು ಶಿಸ್ತಿನಿಂದ, ಸಭ್ಯತೆಯಿಂದ ನಡೆದುಕೊಳ್ಳಬೇಕು ಅಂತ ನಿಯಮ ಇದೆ, ಮನಸ್ಸಿನಲ್ಲಿದೆ. ಆದ್ರೆ ಯಾರೂ ಅದನ್ನ ಪಾಲನೆ ಮಾಡ್ತಿಲ್ಲ ಎಂದರು.
ಇನ್ನು ಅನುಭವ ಇರೋ ಮಂತ್ರಿಗಳು, ಶಾಸಕರು, ಮಾಜಿ ಮಂತ್ರಿಗಳು ಇದ್ದಾರೆ. ಬುಧವಾರ ನಡೆದ ಘಟನೆ ನಾವೆಲ್ಲ ತಲೆ ತಗ್ಗಿಸುವ ಘಟನೆ. ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಏನೇ ಇದ್ದರು ಮಾತಿನ ಮೂಲಕ ಚಾಟಿ ಬೀಸಬೇಕು ಎಂದಿದ್ದಾರೆ.
ಶಾಸಕ ಯತ್ನಾಳ್ ಗೆ ಸ್ವಲ್ಪ ಹೆಚ್ಚಾಗಿ ಅನಾಹುತ ಆಗಿದ್ದರೆ 2023 ಕೆಟ್ಟದಾಗಿ ದಾಖಲಾಗುತ್ತಿತ್ತು. ಇಂತಹ ಘಟನೆಗಳು ಆಗದಂತೆ ಹಿರಿಯ ನಾಯಕರು ಮೇಲೆ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.