ಬೆಂಗಳೂರು, ಏ 03(SM): ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಜಾಗೃತಿಯನ್ನು ಎಲ್ಲೆಡೆ ಮೂಡಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳು ಕೂಡ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿವೆ. ಸರಕಾರದ ವತಿಯಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಈ ನಡುವೆ ಓಲಾ ಸಂಸ್ಥೆ ಕೂಡ ಚುನಾವಣಾ ಜಾಗೃತಿ ಮೂಡಿಸಲು ಮುಂದಾಗಿದೆ.
ಚುನಾವಣೆಯ ದಿನದಂದು ವಿಕಲಚೇತನರು ಓಲಾ ಪ್ರಯಾಣಕ್ಕೆ ಯಾವುದೇ ಶುಲ್ಕ ಇರದು. ಫ್ರೀಯಾಗಿ ಮತಗಟ್ಟೆಗಳಿಗೆ ತೆರಳಿ ಮನೆಗೆ ವಾಪಸ್ ತೆರಳುವ ಅವಕಾಶವನ್ನು ಅವರು ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಮತದಾನದ ದಿನ ವಿಕಲಚೇತನರಿಗೆ ಉಚಿತ ಪ್ರಯಾಣ ನೀಡುವುದಾಗಿ ಓಲಾ ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ವಿಕಲಚೇತನರು ಓಲಾಗೆ ಕರೆ ಮಾಡಲು ಕೂಪನ್ಗಳನ್ನು ವಿತರಣೆ ಮಾಡಲಾಗುತ್ತದೆ. ಕೂಪನ್ ಬಳಸಿಕೊಂಡು ಅವರನ್ನು ಸಂಪರ್ಕಿಸಬಹುದಾಗಿದೆ.
ಇನ್ನು ಚುನಾವಣಾ ಆಯೋಗವು ಸಹ ವಿಕಲಚೇತನರಿಗೆ ನೆರವಾಗುತ್ತಿದೆ. ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಿದೆ. ಅಂಗವಿಕಲರು ಬಂದು ತಮ್ಮ ಮತವನ್ನು ಚಲಾವಣೆ ಮಾಡಬೇಕು ಎಂದು ಆಯೋಗ ಮನವಿ ಮಾಡಿದೆ.