ಬೆಂಗಳೂರು, ಜು 22 (DaijiworldNews/MS): ವಿದೇಶಕ್ಕೆ ಪರಾರಿಯಾಗಿರುವ ಶಂಕಿತ ಉಗ್ರ ಜುನೈದ್ ಬಂಧನಕ್ಕಾಗಿ ಇಂಟರ್ ಪೋಲ್ ನೆರವು ಪಡೆಯಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
ಜುನೈದ್ ಜಾಮೀನು ಪಡೆದು ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದು ದುಬೈಗೆ ಹಾರಿ ತಲೆಮರೆಸಿಕೊಂಡಿರುವ ಮಾಹಿತಿಯಿದೆ.
ಕಳೆದ 2021ರಲ್ಲಿ ದುಬೈಗೆ ಜುನೈದ್ ಪ್ರಯಾಣ ಬೆಳೆಸಿರುವ ದಾಖಲೆಗಳು ಲಭ್ಯವಾಗಿದ್ದು, ಆದರೆ ಆತ ಅಲ್ಲಿಂದ ಎಲ್ಲಿಗೆ ಹೋದ ಎಂಬುದು ಖಚಿತವಾಗಿಲ್ಲ.ಆದರೆ ಜುನೈದ್ ಭಯೋತ್ಪಾದಕರ ನೆಲೆ ಬೀಡಾಗಿರುವ ಅಪ್ಘಾನಿಸ್ತಾನ ಗಡಿ ಸೇರಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ
ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಇಂಟರ್ಪೋಲ್ಗೆ ವರದಿ ಸಲ್ಲಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ೨೦೨೧ರಲ್ಲಿ ಜುನೈದ್ ದುಬೈಗೆ ಎಸ್ಕೇಪ್ ಆಗಿದ್ದು, ಸದ್ಯ ಆತ ಈಗ ಎಲ್ಲಿದ್ದಾನೆ ಎನ್ನುವ ಮಾಹಿತಿ ಖಚಿತಗೊಂಡಿಲ್ಲ. ಹೀಗಾಗಿ, ಲುಕ್ಔಟ್ ನೋಟಿಸ್ ಕೂಡ ಜಾರಿಗೊಳಿಸಲು ನಿರ್ಧೆರಿಸಲಾಗಿದೆ.