ಭುವನೇಶ್ವರ, ಜು 23 (DaijiworldNews/AK):ಒಡಿಶಾ ಸಿಎಂ ನವೀನ್ ಪಟ್ನಾಯಕ್ ಎರಡನೇ ಅತೀ ದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು 23 ವರ್ಷ 4 ತಿಂಗಳು 17 ದಿನಗಳು ಆಡಳಿತ ನಡೆಸುವ ಮೂಲಕ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಜಯಭೇರಿಯಾಗಿ 6ನೇ ಬಾರಿ ಮುಖ್ಯ ಮಂತ್ರಿ ಯಾದರೆ, 2024ರ ಆಗಸ್ಟ್ ನಲ್ಲಿ ಅವರು ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎನಿಸಲಿದ್ದಾರೆ. ಈಗ ಸಿಕ್ಕಿಂನ ಪವನ್ ಕುಮಾರ್ ಚಾಮ್ಲಿಂಗ್ ಭಾರತದ ರಾಜ್ಯವೊಂದರ ದೀರ್ಘಕಾಲದ ಮುಖ್ಯ ಮಂತ್ರಿಯಾಗಿದ್ದಾರೆ.
ತನ್ನ ತಂದೆ ಬಿಜು ಪಟ್ನಾಯಕ್ ಮರಣದ ಬಳಿಕ ನವೀನ್ ಪಟ್ನಾಯಕ್ 1997ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಮೊದಲು ಅವರು ಆಸ್ಕ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.ಅದೇ ವರ್ಷ ಪಕ್ಷ ಎರಡು ವಿಭಾಗವಾಗಿ, ಬಿಜು ಜನತಾದಳ ಸ್ಥಾಪನೆಯಾಯಿತು.ಇದರಿಂದ ಕೇಂದ್ರದಲ್ಲಿದ್ದ ಎನ್ಡಿಎಗೆ ಬೆಂಬಲ ನೀಡುವ ಮೂಲಕ ನವೀನ್ ಪಟ್ನಾಯಕ್ ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿ ಆಧಿಕಾರ ಪಡೆದರು.2000 ರಲ್ಲಿ ಒಡಿಶಾ ವಿಧಾನಸಭೆಗೆ ಬಂದ ಅವರು , ಸತತ 5 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಆಡಳಿತ ನಡೆಸುತ್ತಿದ್ದಾರೆ.